Sunday, March 9, 2014

IT ಉದ್ಯೋಗಿಯ Onsite ಹಣೆಬರಹ

ಕಿಶೋರ ಹುಟ್ಟಿದ್ದು ಬೆಳೆದದ್ದು, ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿಯಲ್ಲಿ. ಯಾರೋ ಏನೋ ಹೇಳಿದರು - PUC ಯಲ್ಲಿ ಉತ್ತಮ ಮಾರ್ಕ್ಸ್ ತೆಗೆದು ಒಳ್ಳೆ ಇಂಜಿನಿಯರಿಂಗ್ ಕಾಲೇಜ್ ಸೇರಿದರೆ ಲೈಫು ಸೆಟ್ಲು ಅಂತ, ಅವನ ಕಷ್ಟ ಪಟ್ಟು ಓದಿ ಒಳ್ಳೆ ಇಂಜಿನಿಯರಿಂಗ್ ಕಾಲೇಜ್ ಸೇರಿದ. ಕಾಲೇಜ್ ನಲ್ಲಿ ಸೀನಿಯರ್ ಹೇಳುದ್ರು - ಏನಾದ್ರು ಮಾಡಿ ಒಂದು ಒಳ್ಳೆ ಕಂಪನಿಲಿ ಕೆಲ್ಸನ ಕ್ಯಾಂಪಸ್ ಪ್ಲೇಸ್ಮೆಂಟ್ ನಲ್ಲೆ ತಗೊಂಡ್ರೆ, ಮುಂದೆ ಏನು ಯೋಚನೆ ಇಲ್ಲ, ಲೈಫು ಸೆಟ್ಲು ಅಂತ. ಇವನು ಹಾಗೋ ಹೀಗೋ ಐದಾರು ಕಂಪನಿಗಳಲ್ಲಿ ಇಂಟರ್ವ್ಯೂ ಕೊಟ್ಟ ಮೇಲೆ - ಒಂದು ಕಂಪನಿಯಲ್ಲಿ ಪ್ಲೇಸು ಆದ.

ಕಾಲೇಜು ಮುಗಿಸಿ, ಮೂರ್ನಾಲ್ಕು ತಿಂಗಳಲ್ಲಿ ಕಂಪನಿ ಸೇರಲು ಕರೆಬಂತು.  ಸೇರಿದ ಮೊದಲ ಎರಡು ಮೂರು ತಿಂಗಳು ಬರಿ ಅದು ಇದು ಟ್ರೈನಿಂಗ್ ಗಳೇ ಆದವು. ಆದಾದ ನಂತರ ಬೆಂಚಿನಲ್ಲಿ ಕುಳಿತು ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದ. ಒಂದೆರಡು ತಿಂಗಳಲ್ಲಿ ಪ್ರಾಜೆಕ್ಟು ಸಿಕ್ಕಿತು. ಮೊದಮೊದಲು ಸಂಬಳ ಬಂದಾಗ - ಇಷ್ಟೊಂದು ದುಡ್ಡು ಏನು ಮಾಡುವುದು ಅಂತ ಯೋಚಿಸುತ್ತಿದ್ದ. ಅಪ್ಪ, ಅಮ್ಮ, ಅಕ್ಕ, ತಮ್ಮ ಇವರೆಲ್ಲರಿಗೂ ಬಟ್ಟೆ ಬರೆ ತೆಗೆದು ಕೊಟ್ಟಿದ್ದೂ ಆಯಿತು. ಗೆಳೆಯರಿಗೆ ಪಾರ್ಟಿ ಕೊಡಿಸಿದ್ದೂ ಆಯ್ತು. ಮೊದಮೊದಲು BMTC ಸಾಮಾನ್ಯ ಬಸ್ ನಲ್ಲಿ ಓಡಾಡುತ್ತಿದ್ದವನು, ಈಗ ವೋಲ್ವೋ ದಲ್ಲಿ ಓಡಾಡುವುದು, ಸ್ವಲ್ಪ ಸಮಯ ಬಸ್ ಗಾಗಿ ಕಾದರೆ - ಆಟೋ ಹುಡುಕುತ್ತಿದ್ದ. ಮಾಲ್ ನಲ್ಲಿ ಶಾಪಿಂಗ್, KFC, ಪಿಜ್ಜಾ ಹಟ್ ಗೆ ಹೋಗುವುದು ಸಮಾನ್ಯವಾಯಿತು. ತಾನು ಇದ್ದ ಸಣ್ಣ ರೂಂ ಬಿಟ್ಟು ಇಬ್ಬರು ಸ್ನೇಹಿತರ ಜೊತೆ ಸೇರಿ 3 ಬೆಡ್ ರೂಂ ಬಾಡಿಗೆ ಮನೆ ಸೇರಿದ. ಅಂತೂ ಖರ್ಚು ಮೊದಲಿಗಿಂತ ಜಾಸ್ತಿಯಾಯಿತು. ಜೊತೆಗೆ ಊರಲ್ಲಿ ಇರುವ ಅಪ್ಪ ಅಮ್ಮನಿಗೆ ಸ್ವಲ್ಪ ಹಣ ಕಳಿಸಬೇಕಿತ್ತು. ವರ್ಷ ಮುಗಿಯುವುದೊರಳಗೆ ಬರುವ ಸಂಬಳದಲ್ಲಿ ತಿಂಗಳು ನಿಭಾಯಿಸಲು ಸಾಕಗುತ್ತಿದ್ದು. ಟ್ರಿಪ್, ಟ್ರೆಕಿಂಗ್ ಅಂದ್ರೆ ಲೆಕ್ಕಚಾರ ಮಾಡಿ ಹೊಗಬೇಕಾಯಿತು.

ಮೊದಲ ವರ್ಷದ ಪರ್ಫಾರ್ಮೆನ್ಸ್ ರಿವ್ಯೂ ಅದ ಮೇಲೆ ಸಂಬಳ ಬಡ್ತಿ ಆದರೆ - ಸ್ವಲ್ಪವಾದರೂ ಹಣ ಉಳಿಸಬೇಕು ಅಂತ ಯೊಚುಸಿತ್ತಿದ. ಆದರೆ ಮೊದಲ ವರ್ಷದಲ್ಲಿ ಸಂಬಳ ಬಡ್ತಿ ಏನು ಸಿಗಲಿಲ್ಲ. ಸ್ನೆಹಿತರ ಜೊತೆ ಇದರ ಬಗ್ಗೆ ಚರ್ಚೆ ಮಾಡುತ್ತ ಇರುವಾಗ - ಹೇಗಾದರೂ ಆನ್ಸೈಟ್ ಆಪರ್ಚುನಿಟಿ ಸಿಕ್ಕರೆ - ವಿದೇಶ ಸುತ್ತಬಹುದು, ಮಜಾ ಮಾಡಬಹುದು, ಜೊತೆಗೆ ಹಣವನ್ನು ಸುಲಭವಾಗಿ ಉಳಿಸಬಹುದೆಂಬ ಯೋಚನೆ ಮನಸಿನಲ್ಲಿ ಮನೆ ಮಾಡಿತು. ಸಮಯ ನೋಡಿ ಮ್ಯಾನೇಜರ್ ಜೊತೆ ಮಾತಾಡಬೇಕು ಅಂತ ಪ್ಲಾನ್ ಮಾಡಿದ. ಜೊತೆಗೆ ಅವನ US ಟೀಮ್‍ ಮೇಟ್ಸ್ ಜೊತೆ ಅವಕಾಶ ಸಿಕ್ಕಾಗಲೆಲ್ಲ ಮಾತಾಡುತ್ತಿದ್ದ. ಚೆನ್ನಾಗಿ ಕೆಲಸ ಮಾಡುತ್ತಿದ್ದರಿಂದ ಆನ್ಸೈಟ್ ಪ್ರಾಜೆಕ್ಟ್ ಮ್ಯಾನೇಜರ್ ಇವನಿಗೆ ಪರಿಚಯವಾಗಿತ್ತು. ಒಮ್ಮೆ ಮ್ಯಾನೇಜರ್ ಜೊತೆ ಮಾತಾಡುವಾಗ - ನೀನು ಯಾವಾಗಲಾದರೂ US ಗೆ ಹೋಗಿದ್ದಿಯಾ ಅಂತ ಕೇಳಿದರು, ಇವನು ತಲೆ ಅಲ್ಲಾಡಿಸಿ ಇಲ್ಲ ಎಂದು ಉತ್ತರಿಸಿದ. ಮ್ಯಾನೇಜರ್ ನಮ್ಮ ಪ್ರಾಜೆಕ್ಟ್ ನಲ್ಲಿ ಇನ್ನು ಒಬ್ಬ ಆನ್ಸೈಟ್ ನಲ್ಲಿ ಇದ್ದಾರೆ ಕ್ಲೈಂಟ್ ಜೊತೆ ಸಂಪರ್ಕ ಮಾಡಲು ಒಳ್ಳೆಯದು, ನೀನು ಇದೆ ರೀತಿ ಚೆನ್ನಾಗಿ ಕೆಲಸ ಮಾಡಿದರೆ ಮುಂದಿನ ಆರು ತಿಂಗಳಲ್ಲಿ ನಿನ್ನುನ್ನ US ಗೆ ಕಲಿಸುವ ವ್ಯವಸ್ಥೆ ಮಾಡುವ ಎಂದರು. ಇವನು ಖುಷಿಯಾಗಿ ಇನ್ನೂ ಚೆನ್ನಾಗಿ ಕೆಲಸ ಮಾಡಿದ, ಆದರೆ ಆರು ತಿಂಗಳಲ್ಲಿ ಇವನ ಬದಲು ಇವನ ಸೀನಿಯರ್ US ಗೆ ಹೋದ. ಇವನಿಗೆ ಸ್ವಲ್ಪ ಬೇಜಾರು ಆಯಿತು, ಮ್ಯಾನೇಜರ್ ಅವನ ಹತ್ತಿರ ವೀಸಾ ರೆಡಿ ಇತ್ತು, ಅದು ಅಲ್ಲದೆ ಈಗ ಪ್ರಾಜೆಕ್ಟ್ ರಿಲೀಸ್ ಟೈಮ್, ನಿನ್ನ ವೀಸಾ ರೆಡಿ ಇದ್ದರೆ - ನಿನ್ನನ್ನು ಕಳಿಸಬಹುದಿತ್ತು ಅಂದರು. ನೀನು ವೀಸಾಗೆ ಅಪ್ಲೈ ಮಾಡಿ, ವೀಸಾ ವನ್ನು ರೆಡಿ ಆಗಿ ಇಟ್ಟುಕೊಂಡಿರು ಎಂಬ ಉಪದೇಶ ಕೊಟ್ಟರು. ಇವನು ಸೀನಿಯರ ಹತ್ತಿರ ವೀಸಾ ಹೇಗೆ ಅಪ್ಲೈ ಮಾಡೋದು ಅಂತ ಎಲ್ಲ ಕೇಳಿ - ಅಪ್ಲೈ ಮಾಡಿದ - ದುರುದ್ರಷ್ಟವಶಾತ್ ಇವನ ವೀಸಾ ರೆಜೆಕ್ಟ್ ಆಯಿತು. ಇವನಿಗೆ ತುಂಬಾನೇ ಬೇಜಾರು ಆಯಿತು. ಮ್ಯಾನೇಜರ್ ವೀಸಾ ಇಂಟರ್ವ್ಯೂ ಯಾವ ರೀತಿ ಫೇಸ್ ಮಾಡಬೇಕು ಅಂತ ಸ್ವಲ್ಪ ಬುದ್ದಿ ಹೇಳಿ - ಮತ್ತೊಮ್ಮೆ ವೀಸಾ ಗೆ ಅಪ್ಲೈ ಮಾಡು, ಆದರೆ ಈಗಲೇ ಬೇಡ - ಈಗ ಸ್ವಲ್ಪ ಬಡ್ಜೆಟ್ ಪ್ರಾಬ್ಲಮ್ ಅಂತ ಹೇಳಿದರು.

ಇವನಿಗೆ ಮತ್ತೆ ವೀಸಾ ಗೆ ಅಪ್ಲೈ ಮಾಡಿದ್ದು, ೨ ವರ್ಷದ ನಂತರ. ಈ ಬಾರಿ ಇಂಟರ್ವ್ಯೂಗೆ ಚೆನ್ನಾಗೆ ತಯಾರಿ ಮಾಡಿದ್ದ, ಜೊತೆಗೆ ಆಂದ್ರಪ್ರದೇಶದ ವೀಸಾ ಬಾಲಾಜಿ ಹತ್ತಿರ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದ. ಅಂತು ಇಂತೂ ಇವನಿಗೆ ವೀಸಾ ಸಿಕ್ಕಿತು. ಮುಂದೆ ಏಳೆಂಟು ತಿಂಗಳಲ್ಲಿ ಆನ್ಸೈಟ್ ಹೋಗಬೇಕು ಎಂದು ಮ್ಯಾನೇಜರ್ ಹೇಳಿದರು. ಮ್ಯಾನೇಜರ್ ಹೇಳಿದಂತೆ ಆನ್ಸೈಟ್ ಗೆ ಹೋಗಲು ಕರೆಯು ಬಂತು. ಕಂಪನಿಯವರು ಏರ್ ಟಿಕೆಟ್ ಬುಕ್ ಮಾಡಿಸಿ ಕೊಟ್ಟರು. ಇವನ ಸಂತಸಕ್ಕೆ ಮಿತಿಯೇ ಇರಲಿಲ್ಲ.

ಕಿಶೋರ ಗೆಳೆಯರಿಗೆ ದೊಡ್ಡ ಪಾರ್ಟಿಯನ್ನೇ ಕೊಟ್ಟನು. ಊರಲ್ಲಿ ಇವನ ಮದುವೆಯ ವಿಷಯವನ್ನು ೨ ವರ್ಷ ಮುಂದೂಡಿದರು. ಹುಡುಗ US ಗೆ ಹೋಗಿ ಬಂದಿದಾನೆ ಎಂದರೆ, ದೊಡ್ಡ ಮನೆತನದಿಂದ ಹುಡುಗಿ ಸಿಗಬಹುದು ಎಂದು. ಬಾಡಿಗೆ ಮನೆಯನ್ನು ಬಿಡುವ ಮಾತಾಯಿತು - ಇವನ ಜೊತೆ ಇದ್ದ ಗೆಳೆಯರು ಈ ಬಾಡಿಗೆ ಮನೆಯನ್ನು ಬಿಟ್ಟು ಒಂದು ಸಣ್ಣ ಮನೆ ಮಾಡುವ ಯೋಚನೆಯಲ್ಲಿದ್ದರು. ಇವನು ಕೊಂಡುಕೊಂಡಿದ್ದ ಕುರ್ಚಿ ಮಂಚಗಳನ್ನು ಗೆಳೆಯರಿಗೆ ಕೊಟ್ಟ, ಟಿ.ವಿ ಮತ್ತು ಫ್ರಿಡ್ಜ್ ಅನ್ನು ಊರಿಗೆ ಕಳಿಸಿದ.

ಇಂದು ಅವನು US ಗೆ ಹೋಗುವ ದಿನ, ಏರ್ಪೋರ್ಟ್ ಗೆ ಹೋಗಲು ಬುಕ್ ಮಾಡಿದ ಟ್ಯಾಕ್ಸಿ ಸಮಯಕ್ಕೆ ಸರಿಯಾಗಿ ಬಂದು ಇವನು ಮತ್ತು ಇವನ ಲಗೇಜ್ ಅನ್ನು ಏರ್ಪೋರ್ಟ್ ಸೇರಿಸಿತು. ಫ್ಲೈಟ್ ಗೆ ಇನ್ನು ೩ ಗಂಟೆ ಸಮಯ ಇದೆ. ಆ ಸಮಯದಲ್ಲಿ ಇವನ ಗೆಳೆಯರು ಫೋನ್ ಮಾಡಿ ವಿಶ್ ಮಾಡಿದರು, ಊರಿಂದ ಅಜ್ಜ ಅಜ್ಜಿಯೂ ಫೋನ್ ಮಾಡಿದರು, ಒಂದಿಬ್ಬರು ನೆಂಟರಿಷ್ಟರು, ಹಳೆಯ ಗೆಳೆಯರು, ಕಂಪನಿಯ ಸಹ ಕೆಲಸಗಾರರು, ಇವನ ಹಳೆ ಗರ್ಲ್ ಫ್ರೆಂಡ್ ಎಲ್ಲರು ಫೋನ್ ಮಾಡಿ ವಿಶ್ ಮಾಡಿದರು. ಇವನ ಮ್ಯಾನೇಜರ್ ಸಹಾ ಫೋನ್ ಮಾಡುದ್ರು - ಕೆಲ ಕಾರಣಗಳಿಂದ ಸದ್ಯಕ್ಕೆ ಆನ್ಸೈಟ್ ಹೋಗುವುದು ಬೇಡ ಎಂದು ತಿಳಿಸಲು ಫೋನ್ ಮಾಡಿದ್ರು. ಇವನಿಗೆ ಏನು ಮಾಡೋಬೇಕು ಅಂತ ತಿಳಿಯದಾಯಿತು - ಅಪ್ಪ ಅಮ್ಮ ನಿಗೆ ಈ ವಿಷಯ ಹೇಗೆ ಹೇಳುದುವು, ನಾಳೆ ಅದೇ ಆಫೀಸ್ ಗೆ ವಾಪಾಸ್ ಹೇಗೆ ಹೋಗುವುದು, ಈಗ ಎಲ್ಲಿಗೆ ಹೋಗುವುದು ಅಂತೆಲ್ಲಾ ಯೋಚಿಸಿದ, ಮನಸ್ಸಿಗೆ ತುಂಬಾನೇ ಬೇಜಾರು ಆಯಿತು. ಇವನ ಅದೃಷ್ಟಕ್ಕೆ ಗೆಳೆಯರು ಮನೆಯನ್ನು ಇನ್ನು ಕಾಲಿ ಮಾಡಿರಲಿಲ್ಲ, ಅಲ್ಲಿಗೆ ಹೋಗಲು ನಿರ್ದರಿಸಿ - ಟ್ಯಾಕ್ಸಿ ಇಡಿದು ಗೆಳೆಯರ ಮನೆಗೆ ಹೊರಟ.

- ಖ’ನಿಜ’

7 comments:

 1. ಒಳ್ಳೆ ಶುರು ಖನಿಜ .. ಮತ್ತಷ್ಟು ಬರಹಗಳನ್ನು ಉದುರಿಸಿ ...
  ಕೆಜ್ರಿವಾಲ್ ದೆಸೆಯಿಂದ ಎಲ್ಲ ಒಳ್ಳೇದ್ ಆಗ್ಲಿ ನಿಮಗೆ...

  ಇಂತಿ
  ಸಂದೀಪ್

  ReplyDelete
 2. ಸೂಪರ್ ಖನಿಜಣ್ಣ !! ತುಂಬಾ ಚೆನ್ನಾಗಿದೆ :)

  ReplyDelete
 3. ತುಂಬಾ ಚೆನ್ನಾಗಿದೆ ಖನಿಜ್... :-)

  ReplyDelete
 4. ಧನ್ಯವಾದಗಳು ಯಕ್ಷಿತ್, ಬಸವರಾಜ್ , ಸಂದೀಪ್.

  ReplyDelete
 5. ಒಂದು ವರುಷದ ನಂತರ ಹೋದನ ಕಿಶೋರ ಅಮೇರಿಕಾಗೆ? ಅದರ ಕತೆನು ಕೆಳೋಹಾಗೆರುತೆ!

  ReplyDelete